ಭಾರತೀಯ ಕ್ರಿಕೆಟ್ ತಂಡದ ಯುವ ಹಾಗೂ ಭರವಸೆಯ ಬಲಗೈ ವೇಗದ ಬೌಲರ್ ಆಕಾಶ್ ದೀಪ್ ಹೊಸ ಇನಿಂಗ್ಸ್ ಅನ್ನು ಸಂಭ್ರಮದಿಂದ ಆರಂಭಿಸಿದ್ದಾರೆ. ಬಿಹಾರದ ರೋಹ್ತಾಸ್ ಜಿಲ್ಲೆಯ ಸಣ್ಣ ಹಳ್ಳಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳದಲ್ಲಿ ದೇಶದ ಗಮನ ಸೆಳೆದಿರುವ ಈ ಯುವ ವೇಗಿ.
ಇವರು ಐತಿಹಾಸಿಕ ವಾರಣಾಸಿಯಲ್ಲಿ ಅಕ್ಷಿತಾ ರಾಜ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಕಾಶ್ ದೀಪ್ ತಮ್ಮ ಮದುವೆಯ ಸಂಭ್ರಮದ ಸುಂದರ ಫೋಟೋಗಳು ಮತ್ತು ಧಾರ್ಮಿಕ ವಿಧಿವಿಧಾನಗಳ ವಿಶೇಷ ವೀಡಿಯೊಗಳನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಹಾಗೂ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಕ್ರಿಕೆಟ್ ಆಟಗಾರನ ಮದುವೆಗೆ ಅಭಿಮಾನಿಗಳು ಹಾಗೂ ಕ್ರಿಕೆಟ್ ಆಟಗಾರರು ಶುಭ ಕೋರಿದ್ದಾರೆ.


