‘ಧುರಂಧರ್ 2’ ಬಗ್ಗೆ ಸುಳ್ಳು ಹೇಳಿ ಸಿಕ್ಕಿ ಹಾಕಿಕೊಂಡ ನಟ ರಾಮ್ ಚರಣ್

ಇತ್ತೀಚೆಗಷ್ಟೆ ನಟ ರಾಮ್ ಚರಣ್, ಮಾಧ್ಯಮವೊಂದು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸಿನಿಮಾಗಳ ಬಗ್ಗೆ, ಸಿನಿಮಾಗಳಲ್ಲಿ ರಾಷ್ಟ್ರೀಯತೆಯ ಬಗ್ಗೆ ಮಾತನಾಡಿದರು. ಇದೇ ಸಂವಾದದಲ್ಲಿ ‘ಧುರಂಧರ್’ ಸಿನಿಮಾದ ಬಗ್ಗೆಯೂ ಚರ್ಚೆಯಾಯ್ತು, ಈ ವೇಳೆ ನಟ ರಾಮ್ ಚರಣ್, ‘ನಾನು ಕಳೆದ ವಾರವಷ್ಟೆ ಒಟಿಟಿಯಲ್ಲಿ ‘ಧುರಂಧರ್’ ಸಿನಿಮಾ ನೋಡಿದೆ. ಅದೊಂದು ಬಹಳ ಅದ್ಭುತವಾದ ಸಿನಿಮಾ, ಆ ಸಿನಿಮಾನಲ್ಲಿ, ಎಲ್ಲ ವಿಷಯಗಳು ಸರಿಯಾಗಿ ಒದಗಿ ಬಂದಿವೆ’ ಎಂದರು.

ಆದರೆ ರಾಮ್ ಚರಣ್, ‘ಧುರಂಧರ್ 2’ ಸಿನಿಮಾ ಬಿಡುಗಡೆ ಆದ ಮರುದಿನವೇ (ಮಾರ್ಚ್ 20) ಸಿನಿಮಾ ಬಗ್ಗೆ ಟ್ವೀಟ್ ಮಾಡಿ, ಸಿನಿಮಾವನ್ನು ಕೊಂಡಾಡಿದ್ದರು. ಖುದ್ದು ಸಿನಿಮಾ ನೋಡಿ ಬರೆದವರಂತೆ ವಿಮರ್ಶೆ ಸಹ ಬರೆದಿದ್ದರು. ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಅವರ ಕ್ರಿಯಾಶೀಲತೆಯನ್ನು, ರಣ್ವೀರ್ ಸಿಂಗ್ ಅವರ ನಟನೆಯನ್ನು ಕೊಂಡಾಡಿದ್ದರು. ರಾಮ್ ಚರಣ್ ಟ್ವೀಟ್ ನೋಡಿದವರು, ನಟ ಸಿನಿಮಾ ನೋಡಿ ಟ್ವೀಟ್ ಮಾಡಿದ್ದಾರೆ ಎಂದುಕೊಂಡಿದ್ದರು. ಆದರೆ ಈಗ ರಾಮ್ ಚರಣ್, ತಾವು ಇತ್ತೀಚೆಗಷ್ಟೆ ಒಟಿಟಿಯಲ್ಲಿ ಸಿನಿಮಾ ನೋಡಿದೆ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ರಾಮ್ ಚರಣ್ ಟ್ರೋಲ್ ಆಗುತ್ತಿದ್ದಾರೆ.

‘ಪೆದ್ದಿ’ ಪ್ರಚಾರದ ಸಮಯದಲ್ಲಿ ಜಸ್ಪೀತ್ ಬುಮ್ರಾ ಅವರನ್ನು ಫುಟ್​​ಬಾಲರ್ ಎಂದು ಹೇಳಿ ಟ್ರೋಲ್ ಆಗಿದ್ದರು. ಈಗ ‘ಧುರಂಧರ್ 2’ ಸಿನಿಮಾ ಬಗ್ಗೆ ಮಾತನಾಡಿ ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ.

spot_img
- Advertisement -spot_img
- Advertisement -spot_img
- Advertisement -spot_img

Related Articles

Stay Connected

347,000FansLike
122,000FollowersFollow
193,000SubscribersSubscribe
spot_img

Latest Articles