ಮಹಿಳಾ ವಿಶ್ವಕಪ್​ನಿಂದ ಕನ್ನಡತಿ ಔಟ್!, ಟೀಮ್​ ಇಂಡಿಯಾಗೆ ದೊಡ್ಡ ಆಘಾತ

ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026ರಲ್ಲಿ ಪ್ರಶಸ್ತಿ ಗೆಲ್ಲುವ ಪ್ರಬಲ ಸ್ಪರ್ಧಿಯಾಗಿರು ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ತಂಡದ ಸ್ಟಾರ್ ಆಲ್‌ರೌಂಡರ್ ಮತ್ತು ಆಫ್-ಸ್ಪಿನ್ನರ್ ಶ್ರೇಯಾಂಕ ಪಾಟೀಲ್ ಗಂಭೀರ ಗಾಯದಿಂದಾಗಿ ಟೂರ್ನಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಬುಧವಾರ ನೆದರ್ಲ್ಯಾಂಡ್ಸ್ ವಿರುದ್ಧದ ಗ್ರೂಪ್ ಎ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಅವರು ಗಾಯಗೊಂಡಿದ್ದರು, ನಂತರ ಅರ್ಧದಲ್ಲೇ ಮೈದಾನವನ್ನು ತೊರೆಯಬೇಕಾಯಿತು. ಆರನೇ ಓವರ್‌ನ ಮೊದಲ ಎಸೆತದಲ್ಲಿ ಘಟನೆ ಸಂಭವಿಸಿತು. ಡಚ್ ಬ್ಯಾಟರ್ ಫೋಬೆ ಮೊಲ್ಕೆನ್‌ಬೋರ್ ಅವರು ಚೆಂಡನ್ನು ಲೆಗ್ ಸೈಡ್ ಕಡೆಗೆ ಬಾರಿಸಿದ್ದರು.

ಮಿಡ್‌ವಿಕೆಟ್‌ನಲ್ಲಿದ್ದ ಫೀಲ್ಡರ್ ಚೆಂಡನ್ನು ಸಂಪೂರ್ಣವಾಗಿ ತಡೆಯಲು ವಿಫಲವಾದ ನಂತರ, ಶ್ರೇಯಾಂಕ ಸ್ವತಃ ಚೆಂಡನ್ನು ಹಿಂಬಾಲಿಸಿ ತಡೆಯಲು ಮುಂದಾದ ವೇಳೆ ಪಾದ ತಿರುವಿ ಸಮತೋಲನ ಕಳೆದುಕೊಂಡು ಬಲವಾಗಿ ನೆಲಕ್ಕೆ ಬಿದ್ದರು, ಇದರ ಪರಿಣಾಮವಾಗಿ ಅವರ ಬಲಗಾಲಿಗೆ ಗಂಭೀರ ಗಾಯವಾಯಿತು. ಶ್ರೇಯಾಂಕ ಅವರ ಗಾಯವು ತಂಡಕ್ಕೂ ನಿರಾಶಾದಾಯಕವಾಗಿದೆ, ಏಕೆಂದರೆ ಅವರು ಇತ್ತೀಚೆಗೆ ಹಳೆಯ ಗಾಯದಿಂದ ಚೇತರಿಸಿಕೊಂಡು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದರು.

spot_img
- Advertisement -spot_img
- Advertisement -spot_img
- Advertisement -spot_img

Related Articles

Stay Connected

347,000FansLike
122,000FollowersFollow
193,000SubscribersSubscribe
spot_img

Latest Articles