ಅಮೆರಿಕ – ಇರಾನ್‌ ಮಾತುಕತೆ ದಿಢೀರ್‌ ರದ್ದು

ಅಮೆರಿಕ(USA) ಮತ್ತು ಇರಾನ್ (Iran) ದೇಶಗಳ ನಡುವಿನ ರಾಜತಾಂತ್ರಿಕ ಮಾತುಕತೆಗಳು ದಿಢೀರ್ ರದ್ದಾಗಿವೆ. ಸ್ವಿಟ್ಜರ್ಲೆಂಡ್‌ನ ಬರ್ಗೆನ್‌ಸ್ಟಾಕ್‌ನಲ್ಲಿ ಇಂದು(ಜೂನ್ 19) ನಡೆಯಬೇಕಿದ್ದ ಈ ಉನ್ನತ ಮಟ್ಟದ ಸಭೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಸ್ವಿಟ್ಜರ್ಲೆಂಡ್(Switzerland) ವಿದೇಶಾಂಗ ಸಚಿವಾಲಯ ಅಧಿಕೃತವಾಗಿ ಪ್ರಕಟಿಸಿದೆ.

ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ (JD Vance) ಅವರು ಸ್ವಿಟ್ಜರ್ಲೆಂಡ್‌ಗೆ ಕೈಗೊಳ್ಳಬೇಕಿದ್ದ ತಮ್ಮ ಅಧಿಕೃತ ಪ್ರವಾಸವನ್ನು ಹೊರಡುವ ಕೆಲವೇ ಗಂಟೆಗಳ ಮುನ್ನ ದಿಢೀರನೆ ಮುಂದೂಡಿದರು. ವ್ಯಾನ್ಸ್ ಅವರ ಅನುಪಸ್ಥಿತಿಯ ಹಿನ್ನೆಲೆಯಲ್ಲಿ, ಇರಾನ್ ನಿಯೋಗದೊಂದಿಗೆ ನಿಗದಿಯಾಗಿದ್ದ ಈ ಮಹತ್ವದ ಶಾಂತಿ ಮಾತುಕತೆಯನ್ನು ಅನಿವಾರ್ಯವಾಗಿ ರದ್ದುಗೊಳಿಸಬೇಕಾಯಿತು ಎಂದು ವರದಿಗಳು ತಿಳಿಸಿವೆ.

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಈ ಸಭೆ ಅತ್ಯಂತ ನಿರ್ಣಾಯಕವಾಗಿತ್ತು. ಸ್ವಿಟ್ಜರ್ಲೆಂಡ್ ಸರ್ಕಾರದ ಆತಿಥ್ಯದಲ್ಲಿ ನಡೆಯಬೇಕಿದ್ದ ಈ ಮಾತುಕತೆಗೆ ಪ್ರಮುಖ ಜಾಗತಿಕ ಮಧ್ಯಸ್ಥಿಕೆದಾರರಾಗಿ ಕತಾರ್ ಮತ್ತು ಪಾಕಿಸ್ತಾನ ದೇಶಗಳು ಸಾಥ್ ನೀಡಿದ್ದವು. ಯುಎಸ್, ಇರಾನ್, ಕತಾರ್ ಮತ್ತು ಪಾಕಿಸ್ತಾನದ ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು.

ಅಮೆರಿಕ, ಇರಾನ್, ಕತಾರ್ ಮತ್ತು ಪಾಕಿಸ್ತಾನ ನಡುವೆ ಆಯೋಜಿಸಲಾಗಿದ್ದ ಪ್ರಮುಖ ಮಾತುಕತೆಗಳನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಸ್ವಿಟ್ಜರ್ಲೆಂಡ್ ವಿದೇಶಾಂಗ ಸಚಿವಾಲಯವು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.ಸಭೆ ರದ್ದಾಗಲು ನಿಖರವಾದ ಕಾರಣ ಅಥವಾ ಮುಂದಿನ ಪರ್ಯಾಯ ದಿನಾಂಕವನ್ನು ಸಚಿವಾಲಯ ತಿಳಿಸಿಲ್ಲ.

ಮಾತುಕತೆಗೆ ಅಗತ್ಯವಿರುವ ಎಲ್ಲಾ ಪೂರ್ವಸಿದ್ಧತೆಗಳು ಬರ್ಗೆನ್‌ಸ್ಟಾಕ್‌ನಲ್ಲಿ ಮುಂದುವರಿಯಲಿದ್ದು, ಭವಿಷ್ಯದಲ್ಲಿ ಈ ಸಭೆಯನ್ನು ಯಶಸ್ವಿಯಾಗಿ ಆಯೋಜಿಸಲು ಸ್ವಿಟ್ಜರ್ಲೆಂಡ್ ಸಂಪೂರ್ಣ ಸನ್ನದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಅಮೆರಿಕ ಹಾಗೂ ಇರಾನ್ ನಡುವಿನ ಬಾಂಧವ್ಯ ಹದಗೆಟ್ಟಿರುವ ಇಂದಿನ ಸಂದರ್ಭದಲ್ಲಿ ಈ ಮಾತುಕತೆ ರದ್ದಾಗಿರುವುದು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಮತ್ತೆ ತಲ್ಲಣ ಮೂಡಿಸಿದೆ.

spot_img
- Advertisement -spot_img
- Advertisement -spot_img
- Advertisement -spot_img

Related Articles

Stay Connected

347,000FansLike
122,000FollowersFollow
193,000SubscribersSubscribe
spot_img

Latest Articles