ಸೊಳ್ಳೆ ಗಾತ್ರದ ಡ್ರೋನ್‌ ಸೃಷ್ಟಿಸಿದ ಚೀನಾ – ಮಿಲಿಟರಿ ಕಣ್ಗಾವಲಿನಲ್ಲಿ ಹೊಸ ಮೈಲಿಗಲ್ಲು

ಇತ್ತೀಚೆಗೆ ಜಗತ್ತಿನ ಎಲ್ಲಾ ದೇಶಗಳು ಭದ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿವೆ. ಅದಕ್ಕಾಗಿ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿ ಮಾರಕ ಶಸ್ತ್ರಾಸ್ತ್ರಗಳು, ರೋಬೋಟ್‌, ಡ್ರೋನ್‌ಗಳನ್ನು ಕಂಡುಹಿಡಿದು ಸಂಗ್ರಹಿಸುತ್ತಿವೆ. ಈಗ ಅದೆಲ್ಲಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಚೀನಾ (China) ಸೊಳ್ಳೆ ಗಾತ್ರದ ಡ್ರೋನ್‌ ( Mosquito Sized Drone) ನಿರ್ಮಿಸಿದೆ.

ಹೌದು, ಚೀನಾದ ಹುನಾನ್ ಪ್ರಾಂತ್ಯದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾಲಯದ (NUDT) ರೊಬೊಟಿಕ್ಸ್ ಪ್ರಯೋಗಾಲಯ ರಹಸ್ಯ ಮಿಲಿಟರಿ ಕಾರ್ಯಾಚರಣೆಗಳಿಗಾಗಿ ಸೊಳ್ಳೆ ಗಾತ್ರದ ಡ್ರೋನ್ ಅಭಿವೃದ್ಧಿಪಡಿಸಿದೆ. ಈ ಸೊಳ್ಳೆ ಗಾತ್ರದ ಮಿಲಿಟರಿ ಡ್ರೋನ್‌ (Military Drone) ಹೇಗಿರುತ್ತೆ? ಇದರ ವಿಶೇಷವೇನು? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಇಲ್ಲಿ ವಿವರಿಸಲಾಗಿದೆ.

ಚೀನಾ ಅಭಿವೃದ್ಧಿಪಡಿಸಿದ ಮೈಕ್ರೋ-ಡ್ರೋನ್ ಗಾತ್ರ ಮತ್ತು ವಿನ್ಯಾಸ ಎರಡರಲ್ಲೂ ಸೊಳ್ಳೆಯನ್ನು ಹೋಲುತ್ತದೆ. ಇದು ಎರಡು ಸಣ್ಣ ಎಲೆ ಆಕಾರದ ರೆಕ್ಕೆಗಳು ಮತ್ತು ಮೂರು ಕೂದಲು ಗಾತ್ರದ ತೆಳುವಾದ ಕಾಲುಗಳನ್ನು ಹೊಂದಿದೆ. ಕೋಲು ಆಕಾರದ ದೇಹವನ್ನು ಹೊಂದಿದೆ. ಈ ಡ್ರೋನ್‌ನ್ನು ಸ್ಮಾರ್ಟ್‌ಫೋನ್ ಬಳಸಿ ನಿಯಂತ್ರಿಸಬಹುದು. ಡ್ರೋನ್ ತುಂಬಾ ಚಿಕ್ಕದಾಗಿದ್ದು ಅದನ್ನು ಎರಡು ಬೆರಳುಗಳ ನಡುವೆ ಹಿಡಿದಿಟ್ಟುಕೊಳ್ಳಬಹುದಾಗಿದೆ ಎಂದು ʻಸೌತ್ ಚೀನಾ ಮಾರ್ನಿಂಗ್ʼ ವರದಿ ಮಾಡಿದೆ.

ಸೊಳ್ಳೆಯಂತಹ ರೋಬೋಟ್ ಯುದ್ಧಭೂಮಿಯಲ್ಲಿ ಮಾಹಿತಿ ಕಲೆಹಾಕಲು ಮತ್ತು ವಿಶೇಷ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಸಣ್ಣ ಗಾತ್ರದಿಂದ ಅದೊಂದು ಡ್ರೋನ್‌ ಎಂದು ಊಹಿಸಲು ಕಷ್ಟಸಾಧ್ಯ. ಈ ಪುಟ್ಟ ಡ್ರೋನ್‌ ದೊಡ್ಡ ಡ್ರೋನ್‌ಗಳನ್ನು ಸುಲಭವಾಗಿ ಪತ್ತೆಹಚ್ಚುತ್ತದೆ. ಅಲ್ಲದೇ ಸೂಕ್ಷ್ಮ ಪ್ರದೇಶಗಳಲ್ಲಿ ರಹಸ್ಯ ಕಣ್ಗಾವಲು ಮತ್ತು ಗುಪ್ತಚರ ಮಾಹಿತಿ ಕಲೆಹಾಕಲು ಸಹಕಾರಿಯಾಗಿದೆ ಎಂದು NUDT ವಿದ್ಯಾರ್ಥಿ ಲಿಯಾಂಗ್ ಹೆಕ್ಸಿಯಾಂಗ್ ಹೇಳಿಕೊಂಡಿದ್ದಾನೆ.

spot_img
- Advertisement -spot_img
- Advertisement -spot_img
- Advertisement -spot_img

Related Articles

Stay Connected

347,000FansLike
122,000FollowersFollow
193,000SubscribersSubscribe
spot_img

Latest Articles