Maharaja Trophy T20: ನಿಕಿನ್‌ ಜೋಸ್‌ ಶತಕ, ಮಂಗಳೂರು ತಂಡಕ್ಕೆ ಭರ್ಜರಿ ಜಯ

ಭರವಸೆಯ ಬ್ಯಾಟ್ಸ್‌ಮನ್‌ ನಿಕಿನ್ ಜೋಸ್ ಅವರು ಬಾರಿಸಿದ ಭರ್ಜರಿ ಶತಕದ ನೆರವಿನಿಂದ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಕೋಸ್ಟಲ್‌ ಕಿಂಗ್ಸ್‌ ಮಂಗಳೂರು ತಂಡ 8 ವಿಕೆಟ್‌ಗಳಿಂದ ಗುಲ್ಬರ್ಗಾ ಮಿಸ್ಟೆಕ್ಸ್‌ ತಂಡವನ್ನು ಮಣಿಸಿ ಅಬ್ಬರಿಸಿದೆ.

ನಿಕಿನ್‌ ಜೋಸ್‌ ಅವರು ಕೊನೆಯ ಎರಡು ಎಸೆತಗಳಲ್ಲಿ ಸತತ ಎರಡು ಸಿಕ್ಸರ್ ಬಾರಿಸಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಈ ಮೂಲಕ ಗುಲ್ಬರ್ಗಾ ನೀಡಿದ್ದ 178 ರನ್‌ಗಳ ಗುರಿಯನ್ನು ಸಮರ್ಥವಾಗಿ ಮೆಟ್ಟಿನಿಂತರು. ಕೋಸ್ಟಲ್‌ ಕಿಂಗ್ಸ್‌ ಮಂಗಳೂರು ತಂಡ ಇನ್ನೂ 21 ಎಸೆತ ಬಾಕಿ ಇರುವಂತೆಯೇ ಪಂದ್ಯ ಗೆದ್ದಿತು. ಕೋಸ್ಟಲ್‌ ಕಿಂಗ್ಸ್‌ ಮಂಗಳೂರು ತಂಡ ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಇದಕ್ಕೂ ಮೊದಲು ಹುಬ್ಬಳ್ಳಿ ಟೈಗರ್ಸ್‌ ವಿರುದ್ಧ ನಡೆದ ಪಂದ್ಯ ಮಳೆಯಿಂದ ರದ್ದಾಗಿತ್ತು. ಇನ್ನು ಗುಲ್ಬರ್ಗಾ‌ ಸತತ ಎರಡನೇ ಗೆಲುವಿನ ನಗೆ ಬೀರುವಲ್ಲಿ ವಿಫಲಾಗಿದೆ.

178 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮಂಗಳೂರು ತಂಡದ ಪರ ಮುರುಳಿಧರ್ ವೆಂಕಟೇಶ್‌ ಬೇಗನೆ ವಿಕೆಟ್‌ ಒಪ್ಪಿಸಿದರು. ಆದರೆ ಈ ಒತ್ತಡ ತಮ್ಮ ಮೇಲೆ ಬೀಳದಂತೆ ನೋಡಿಕೊಂಡ ಭರವಸೆಯ ಆಟಗಾರ ಕರುಣ್ ನಾಯರ್ ಹಾಗೂ ನಿಕಿನ್ ಜೋಸ್‌ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 52 ಎಸೆತಗಳಲ್ಲಿ 96 ರನ್ ಬಾರಿಸಿ ಅಬ್ಬರಿಸಿತು. ಈ ಹಂತದಲ್ಲಿ ಕರುಣ್‌ ನಾಯರ್ 36 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಾಯದಿಂದ 56 ರನ್‌ ಬಾರಿಸಿ ಮಿಂಚಿದರು. ಇವರು ಇಲ್ಲದ ರನ್‌ ಕದಿಯಲು ಹೋಗಿ ರನ್‌ಔಟ್ ಆದರು.

ನಿಕಿನ್ ಜೋಸ್ ಅವರು ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 7 ಬೌಂಡರಿ, 8 ಸಿಕ್ಸರ್ ಸಹಾಯದಿಂದ ಶತಕ ಬಾರಿಸಿ ಅಬ್ಬರಿಸಿದರು. ಇದು ಈ ಆವೃತ್ತಿಯಲ್ಲಿ ದಾಖಲಾದ ಮೊದಲ ಶತಕಾಗಿದೆ.

spot_img
- Advertisement -spot_img
- Advertisement -spot_img
- Advertisement -spot_img

Related Articles

Stay Connected

347,000FansLike
122,000FollowersFollow
193,000SubscribersSubscribe
spot_img

Latest Articles