ಬಿಡದಿ ಸ್ಮಾರ್ಟ್ ಸಿಟಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರ್‌ಸ್ವಾಮಿ ನಡುವೆ ವಾಗ್ದಾಳಿ ತೀವ್ರಗೊಂಡಿದೆ. “ಈ ಯೋಜನೆಯ ಪಿತಾಮಹ ನಾನಲ್ಲ, ಧೈರ್ಯವಿದ್ದರೆ ಭೈರಮಂಗಲಕ್ಕೆ ನನ್ನೊಂದಿಗೆ ಬನ್ನಿ, ಅಲ್ಲಿನ ರೈತರ ಜೊತೆ ನೇರವಾಗಿ ಮಾತನಾಡೋಣ” ಎಂದು ಕುಮಾರ್‌ಸ್ವಾಮಿ ಸವಾಲು ಹಾಕಿದ್ದಾರೆ. ಇತ್ತೀಚೆಗಷ್ಟೇ ಸಚಿವ ಸತೀಶ್ ಜಾರಕಿಹೊಳಿ ಅವರು ಈ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ರಾಜಕೀಯ ಜಿದ್ದಾಜಿದ್ದಿ ರೋಚಕ ಹಂತ ತಲುಪಿದೆ.







