ಬಿಗ್ ಬಾಸ್ ವಿನ್ನರ್ ಗಿಲ್ಲಿ ಪಳಾರ್ ಚಿತ್ರಕ್ಕೆ ಮುಹೂರ್ತ

ಬಿಗ್ ಬಾಸ್ ವಿನ್ನರ್ ಗಿಲ್ಲಿ(BiggBoss Winner Gilli) ನಟನ ಹೊಸ ಸಿನಿಮಾಗೆ(New Cinema) ಇಂದು ಮುಹೂರ್ತ ನಡೆದಿದೆ. ಹುಟ್ಟು ಹಬ್ಬದ(Gilli Birthday) ದಿನದಂದೇ ಗಿಲ್ಲಿ ನಾಯಕನಾಗಿ ಸಿನಿಮಾ ರಂಗ ಪ್ರವೇಶ ಮಾಡಿದ್ದಾರೆ. ಈ ಚಿತ್ರಕ್ಕೆ ಪಳಾರ್ (palar) ಎಂದು ಹೆಸರಿಟ್ಟಿದ್ದು, ಈ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ.

ಬಿಗ್ ಬಾಸ್ ಮನೆಯಿಂದ ಆಚೆ ಬಂದ ನಂತರ ಕನಿಷ್ಠ ಎಂಟರಿಂದ ಹತ್ತು ಸಿನಿಮಾಗಳ ಕಥೆ ಕೇಳಿದ್ದಾರಂತೆ ಗಿಲ್ಲಿ. ಕೊನೆಗೆ ಒಪ್ಪಿಕೊಂಡಿದ್ದು ಪಳಾರ್ ಸಿನಿಮಾವನ್ನು. ತನಗೆ ಆ ಸಿನಿಮಾ ಹತ್ತಿರ ಆದ ಕಾರಣದಿಂದಾಗಿ ಪಳಾರ್ ಕಥೆಯನ್ನು ಒಪ್ಪಿಕೊಂಡರಂತೆ. ಮಂಡ್ಯ ಮತ್ತು ಮೈಸೂರು ಭಾಗದಲ್ಲಿ ನಡೆಯುವ ಕಥೆ ಇದಾಗಿದೆ.

ಕಾಮಿಡಿ ಮೂಲಕ ಹೆಚ್ಚು ಪ್ರಚಾರಕ್ಕೆ ಬಂದವರು ಗಿಲ್ಲಿ. ಹಾಗಾಗಿ ಪಳಾರ್ ಸಿನಿಮಾ ಕೂಡ ಕಾಮಿಡಿ ಕಥಾ ಹಂದರವನ್ನೇ ಹೊಂದಿದೆ. ಈವರೆಗೂ ಏನೆಲ್ಲ ಪಾತ್ರಗಳನ್ನು ಗಿಲ್ಲಿ ಮಾಡಿದ್ದಾರೋ, ಅದರ ಮುಂದುವರೆದ ಭಾಗ ಎನ್ನುವಂತಿದೆಯಂತೆ ಪಾತ್ರ. ಹಾಗಾಗಿ ಪಳಾರ್ ಚಿತ್ರಕ್ಕೆ ಸಹಿ ಮಾಡಿದ್ದಾರಂತೆ.ಇದನ್ನೂ ಓದಿ: ಬೆನ್ನು ನೋವು ಎಂದಿದ್ದ ದರ್ಶನ್‌ಗೆ ಅಲೋಕ್ ಕುಮಾರ್ ಸಲಹೆ – ಜೈಲಿನಲ್ಲಿ ಪ್ರಾಣಾಯಾಮ, ಶವಾಸನ ಮಾಡಿದ ದಾಸ

ಚಂದ್ರ ಮೋಹನ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಕೆವಿಎನ್ ಸಂಸ್ಥೆಯು ಈ ಚಿತ್ರಕ್ಕೆ ಬೆಂಬಲವಾಗಿ ನಿಂತಿದೆ. ಇದೇ ಜೂನ್ 28ರಿಂದ ಚಿತ್ರೀಕರಣಕ್ಕೆ ಹೊರಟಿದೆ ಚಿತ್ರತಂಡ

spot_img
- Advertisement -spot_img
- Advertisement -spot_img
- Advertisement -spot_img

Related Articles

Stay Connected

347,000FansLike
122,000FollowersFollow
193,000SubscribersSubscribe
spot_img

Latest Articles