ಐಶ್ವರ್ಯಾ ರೈ ವಿರುದ್ಧ ಬಾಡಿ ಶೇಮಿಂಗ್: ಟ್ರೋಲರ್ಸ್ ವಿರುದ್ಧ ಸಂಸದೆ ಕಂಗನಾ ರನೌತ್ ಕಿಡಿ
ಪ್ರತಿಷ್ಠಿತ ಕಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಲುಕ್ ಹಾಗೂ ವಯಸ್ಸನ್ನು ಆಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ‘ವಯಸ್ಸಾದ ಮಹಿಳೆ’ ಎಂದು ಕ್ರೂರವಾಗಿ ಟ್ರೋಲ್ ಮಾಡಿದ್ದರು. ಈ ಕುರಿತು ತೀವ್ರ ಅಸಮಾಧಾನ ಹೊರಹಾಕಿರುವ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್, “ವಿಶ್ವಮಟ್ಟದಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ ನಟಿಯ ಯೋಗ್ಯತೆಯನ್ನು ಕೇವಲ ವಯಸ್ಸಿನಿಂದ ಅಳೆಯಬೇಡಿ” ಎಂದು ಟ್ರೋಲರ್ಗಳಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.







