ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಇದೇ ಜುಲೈ ತಿಂಗಳ 23ರಿಂದ ಆಗಸ್ಟ್ 2ರವರೆಗೆ ನಡೆಯಲಿರುವ ಪ್ಯಾರಾ ಕಾಮನ್ ವೆಲ್ತ್ ಗೇಮ್ಸ್ನಲ್ಲಿ ಬಾಸ್ಕೆಟ್ ಬಾಲ್ ಭಾರತೀಯ ಮಹಿಳಾ ತಂಡಕ್ಕೆ ನಾಲ್ಕು ಆಟಗಾರರು ಆಯ್ಕೆ ಆಗಿದ್ದು, ಅದರಲ್ಲಿ ಕರ್ನಾಟಕದ ಏಕೈಕ ಮಹಿಳಾ ಆಟಗಾರ್ತಿ ಲಕ್ಷ್ಮೀ ರಾಯಣ್ಣವರ ಒಬ್ಬರು. ಈಗಾಗಲೇ ರಾಜ್ಯ, ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳ ಬೇಟೆಯಾಡಿ, ಭರವಸೆಯ ಕ್ರೀಡಾಪಟು ಆಗಿ ಹೊರಹೊಮ್ಮಿದ್ದಾರೆ.
ಲಕ್ಷ್ಮೀ ರಾಯಣ್ಣವರ, “ಇದೇ ಮೊದಲ ಬಾರಿ ಪ್ಯಾರಾ ಕಾಮನ್ ವೆಲ್ತ್ ಗೇಮ್ಸ್ನಲ್ಲಿ ಬಾಸ್ಕೆಟ್ ಬಾಲ್ ಅರ್ಹತೆ ಪಡೆದಿದೆ. ಭಾರತ ತಂಡದಲ್ಲಿ ನನಗೆ ಸ್ಥಾನ ಸಿಕ್ಕಿರುವುದಕ್ಕೆ ತುಂಬಾ ಸಂತೋಷ ಆಗುತ್ತಿದೆ. ನನ್ನ ಜತೆಗೆ ಮಹಾರಾಷ್ಟ್ರದ ಇಬ್ಬರು, ಮಣಿಪುರದ ಓರ್ವ ಆಟಗಾರ್ತಿ ಆಯ್ಕೆಯಾಗಿದ್ದಾರೆ. ನಮ್ಮ ತಂಡ ನೂರಕ್ಕೆ ನೂರು ಗೆಲ್ಲುವ ವಿಶ್ವಾಸ ಇದೆ” ಎಂದರು.







