ಸಮಂತಾ ನಟನೆಯಸಿನಿಮಾ ಮೂರೇ ದಿನಕ್ಕೆ 40 ಕೋಟಿಗೂ ಹೆಚ್ಚು ಗಳಿಕೆ

ಸೌತ್​ ಸಿನಿಮಾ ಇಂಡಸ್ಟ್ರಿಯ ಜನಪ್ರಿಯ ನಟಿ ಸಮಂತಾ ರುತ್ ಪ್ರಭು ಮತ್ತೆ ಫಾರ್ಮ್​ಗೆ ಬಂದಿದ್ದಾರೆ. ಅವರ ‘ಮಾ ಇಂಟಿ ಬಂಗಾರಂ’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರವಸೆಯ ಪ್ರದರ್ಶನ ಮುಂದುವರಿಸಿದೆ. ಗಳಿಕೆಯಲ್ಲಿ ಏರಿಕೆ ಕಂಡುಬಂದಿದ್ದು, ಚಿತ್ರ ಗೆಲುವಿನ ನಗೆ ಬೀರಿದೆ.

ಚಿತ್ರದ ಮೂರನೇ ದಿನದ ಕಲೆಕ್ಷನ್ ಮೊದಲ ದಿನದ ಅಂಕಿಅಂಶವನ್ನು ಮೀರಿಸಿದೆ. ಇದು ಸಕಾರಾತ್ಮಕ ಪ್ರತಿಕ್ರಿಯೆಗಳು ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಲು ಸಹಾಯ ಮಾಡುತ್ತಿವೆ ಎಂಬುದನ್ನು ಸೂಚಿಸಿದೆ. 3 ದಿನಗಳಲ್ಲಿ ಚಿತ್ರ ವಿಶ್ವಾದ್ಯಂತ ಒಟ್ಟು 41.79 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

‘ಮಾ ಇಂಟಿ ಬಂಗಾರಂ’ 3 ದಿನಗಳ ಕಲೆಕ್ಷನ್​ ಮಾಹಿತಿ: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಚಿತ್ರ 3ನೇ ದಿನದಂದು 10.10 ಕೋಟಿ ರೂ. ನೆಟ್​ ಕಲೆಕ್ಷನ್​ ಮಾಡಿದೆ. 2ನೇ 7.65 ಕೋಟಿ ರೂ. ಸಂಗ್ರಹಿಸಿತ್ತು. ಅದಕ್ಕೆ ಹೋಲಿಸಿದರೆ ಶೇ.32ರಷ್ಟು ಏರಿಕೆ ಕಂಡುಬಂದಿದ್ದು, ಭಾರತದ ಒಟ್ಟು ನೆಟ್​​ (ನಿವ್ವಳ) ಕಲೆಕ್ಷನ್​ 23.10 ಕೋಟಿ ರೂ.ಗೆ ತಲುಪಿದೆ.

ವಿದೇಶಗಳಲ್ಲಿ, ಚಿತ್ರ ತನ್ನ ಮೊದಲ ಭಾನುವಾರದಂದು 4 ಕೋಟಿ ರೂಪಾಯಿ ಸಂಗ್ರಹಿಸಿದೆ. ಈ ಮೂಲಕ ಒಟ್ಟು ವಿದೇಶಿ ಗಳಿಕೆ 15.10 ಕೋಟಿ ರೂಪಾಯಿಗೆ ತಲುಪಿದೆ. ವಿಶ್ವಾದ್ಯಂತದ ಚಿತ್ರದ ಒಟ್ಟು ಗಳಿಕೆ 41.79 ಕೋಟಿ ರೂ.ಗಳನ್ನು ತಲುಪಿದೆ. ಅದಾಗ್ಯೂ, ಚಿತ್ರಕ್ಕೆ ಇಂದಿನಿಂದ ನಿಜವಾದ ಪರೀಕ್ಷೆ ಆರಂಭವಾಗಲಿದೆ.

spot_img
- Advertisement -spot_img
- Advertisement -spot_img
- Advertisement -spot_img

Related Articles

Stay Connected

347,000FansLike
122,000FollowersFollow
193,000SubscribersSubscribe
spot_img

Latest Articles