‘ಮಾ ಇಂಟಿ ಬಂಗಾರಂ’ ಸಿನಿಮಾ (Maa Inti Bangaram) ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ. ಈ ಚಿತ್ರದ ಬಗ್ಗೆ ಎಲ್ಲ ಕಡೆಗಳಲ್ಲಿ ಪಾಸಿಟಿವ್ ಟಾಕ್ ಶುರುವಾಗಿದೆ. ಈ ಸಿನಿಮಾ ನಾಲ್ಕೇ ದಿನಕ್ಕೆ 50 ಕೋಟಿ ರೂಪಾಯಿ ಗಳಿಕೆ ಮಾಡಿರೋದು ವಿಶೇಷ. ಈ ಸಿನಿಮಾ ನೋಡಿದ ಚಿರಂಜೀವಿ ಅವರು ಖುಷಿಪಟ್ಟಿದ್ದಾರೆ. ಹೀಗಾಗಿ, ಸಮಂತಾ ಅವರನ್ನು ಮನೆಗೆ ಕರೆದು ವಿಶೇಷವಾಗಿ ಸತ್ಕಾರ ಮಾಡಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಸ್ವತಃ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ತೆಲುಗು ಚಿತ್ರರಂಗಕ್ಕೆ ಇಂತಹ ವೈವಿಧ್ಯಮಯ ಹಾಗೂ ಮಹಿಳಾ ಪ್ರಧಾನ ಸಿನಿಮಾಗಳ ಅಗತ್ಯ ತುಂಬಾ ಇದೆ. ಈ ದೊಡ್ಡ ಯಶಸ್ಸಿಗಾಗಿ ಸಮಂತಾ, ನಂದಿನಿ ರೆಡ್ಡಿ, ರಾಜ್ ಮತ್ತು ಇಡೀ ಚಿತ್ರತಂಡಕ್ಕೆ ನನ್ನ ಹೃದಯಪೂರ್ವಕ ಅಭಿನಂದನೆಗಳು’ ಎಂದಿದ್ದಾರೆ.
ಸಮಂತಾ ಶೀಘ್ರವೇ ತಾಯಿ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಈಗ ಚಿರಂಜೀವಿ ಅವರು ವಿಶೇಷವಾಗಿ ಈ ವಿಷಯವನ್ನು ಪರೋಕ್ಷವಾಗಿ ಖಚಿತಪಡಿಸಿದ್ದಾರೆ. ‘ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಹೆಜ್ಜೆ ಇಡುತ್ತಿರುವ ಸಮಂತಾ ಮತ್ತು ರಾಜ್ ದಂಪತಿಗೆ ನನ್ನ ವಿಶೇಷ ಶುಭಾಶಯಗಳು’ ಎಂದು ಹೇಳಿದ್ದಾರೆ. ಈ ಮೂಲಕ ಸಮಂತಾ ತಾಯಿ ಆಗುತ್ತಿರುವ ವಿಷಯ ಖಚಿತಪಡಿಸದಂತಾಗಿದೆ.







