ಭಾರತದಲ್ಲಿ ಟೆಲಿಗ್ರಾಂ ನಿಷೇಧ ತೆರವು

ನೀಟ್ ಮರುಪರೀಕ್ಷೆ (Neet Re-Exam) ಹಿನ್ನೆಲೆ ಭಾರತದಲ್ಲಿ ಟೆಲಿಗ್ರಾಂ ಮೇಲೆ ಹೇರಲಾಗಿದ್ದ ನಿಷೇಧವನ್ನು ಇದೀಗ ತೆರವುಗೊಳಿಸಲಾಗಿದ್ದು, ಮೊದಲಿನಂತೆ ಬಳಕೆದಾರರಿಗೆ ಟೆಲಿಗ್ರಾಂ (Telegram) ಸೇವೆ ಲಭ್ಯವಾಗುತ್ತಿದೆ.

ಸದ್ಯ ಪ್ಲೇ ಸ್ಟೋರ್ (Play Store) ಹಾಗೂ ಆಪ್ ಸ್ಟೋರ್‌ನಲ್ಲಿ (App Store) ಟೆಲಿಗ್ರಾಂ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶವಿದೆ. ಮೊದಲಿನಂತೆ ಮೆಸೇಜ್ ಕಳಿಸಬಹುದು ಎಂದು ಬಳಕೆದಾರರು ತಿಳಿಸಿದ್ದಾರೆ. ಇನ್ನೂ ಕೆಲ ಬಳಕೆದಾರರು ಚಾಟ್ ಓಪನ್ ಮಾಡಲು ಹಾಗೂ ಮೆಸೇಜ್ ಕಳುಹಿಸಲು ಸಮಸ್ಯೆ ಎದುರಾಗುತ್ತಿದೆ ಎಂದಿದ್ದಾರೆ. ಹೀಗಾಗಿ ಸಮಸ್ಯೆ ಬಗೆಹರಿಸಲು ಆಪ್ ರಿಫ್ರೆಶಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಇದನ್ನೂ ಓದಿ: ಜೂ.22 ರವರೆಗೆ ದೇಶದಲ್ಲಿ ಟೆಲಿಗ್ರಾಂ ನಿಷೇಧ – ನೀಟ್‌ ಮರು ಪರೀಕ್ಷೆಗೂ ಮುನ್ನ ಕೇಂದ್ರ ಆದೇಶ

ಟೆಲಿಗ್ರಾಂ ಬಳಸೋಕೆ ಆಗ್ತಿಲ್ಲ ಅಂದ್ರೆ ಹೀಗೆ ಮಾಡಿ:

ಚಾಟ್ ಓಪನ್ ಮಾಡಲು ಹಾಗೂ ಮೆಸೇಜ್ ಕಳುಹಿಸಲು ಸಮಸ್ಯೆ ಎದುರಾಗುತ್ತಿದ್ದರೆ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಲ್ಲಿ ಹೊಸ ಅಪಡೇಟ್ ಡೌನ್‌ಲೋಡ್ ಮಾಡಿಕೊಳ್ಳಿ. ಬಳಿಕ ಆಪ್ ಅನ್ನು ರೀಸ್ಟಾರ್ಟ್ ಮಾಡಿ. ಆನಂತರ ಸೆಟ್ಟಿಂಗ್‌ಗೆ ಹೋಗಿ ಅಪ್ಲಿಕೇಶನ್‌ನಲ್ಲಿ ಟೆಲಿಗ್ರಾಮ್‌ಗೆ ಹೋಗಿ Force Stop ಮೇಲೆ ಕ್ಲಿಕ್ ಮಾಡಿ. ಬಳಿಕ ಟೆಲಿಗ್ರಾಂ ಓಪನ್ ಮಾಡಿ.

spot_img
- Advertisement -spot_img
- Advertisement -spot_img
- Advertisement -spot_img

Related Articles

Stay Connected

347,000FansLike
122,000FollowersFollow
193,000SubscribersSubscribe
spot_img

Latest Articles