ವಾಟ್ಸಾಪ್ನಲ್ಲಿ ಬರುವ ಒಂದು ಸ್ನೇಹಪೂರ್ಣ ಸಂದೇಶದಿಂದ ಆರಂಭವಾಗುತ್ತದೆ. ‘ನಿಮಗಾಗಿ ವಿಶೇಷ ನ್ಯೂ ಇಯರ್ ಗ್ರೀಟಿಂಗ್ ನೋಡಿ’ ಅಥವಾ ‘ನಿಮ್ಮ ಫೋಟೋ ಇರುವ ಹೊಸ ವರ್ಷದ ಶುಭಾಶಯ’ ಎಂಬ ಸಂದೇಶದೊಂದಿಗೆ ಒಂದು ಫೈಲ್ ಅಥವಾ ಲಿಂಕ್ ಬರುತ್ತದೆ. ಈ ಸಂದೇಶಗಳು ಅನೇಕ ಬಾರಿ ಪರಿಚಿತ ವ್ಯಕ್ತಿಗಳ ಖಾತೆಯಿಂದಲೇ ಬರುತ್ತವೆ. ಇದರಿಂದ ಜನರಿಗೆ ಅನುಮಾನ ಬರದೇ, ಫೈಲ್ ಅನ್ನು ಡೌನ್ಲೋಡ್ ಮಾಡುವ ಸಾಧ್ಯತೆ ಹೆಚ್ಚಾಗುತ್ತದೆ.
APK ಎಂದರೆ ಆಂಡ್ರಾಯ್ಡ್ ಪ್ಯಾಕೇಜ್ ಕಿಟ್. ಇದು ಆಂಡ್ರಾಯ್ಡ್ ಫೋನ್ಗಳಲ್ಲಿ ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಲು ಬಳಸುವ ಫೈಲ್. ಸಾಮಾನ್ಯವಾಗಿ ನಾವು ಆ್ಯಪ್ಗಳನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಸುರಕ್ಷಿತವಾಗಿ ಡೌನ್ಲೋಡ್ ಮಾಡುತ್ತೇವೆ. ಆದರೆ ವಾಟ್ಸಾಪ್, SMS ಅಥವಾ ಇಮೇಲ್ ಮೂಲಕ ಬರುವ APK ಫೈಲ್ಗಳನ್ನು ಇನ್ಸ್ಟಾಲ್ ಮಾಡುವುದನ್ನು ಸೈಡ್ಲೋಡಿಂಗ್ ಎಂದು ಕರೆಯಲಾಗುತ್ತದೆ. ಇದು ಬಹಳ ಅಪಾಯಕಾರಿಯಾಗಿದೆ.
ಅದರಂತೆ, ಮೊದಲು ವಂಚಕರು RTO Challan.apk, SBI Yojna.apk ಎಂಬ ಸರ್ಕಾರಿ ಹೆಸರಿನ ಫೈಲ್ಗಳನ್ನು ಕಳುಹಿಸುತ್ತಿದ್ದರು. ಈಗ ಹಬ್ಬದ ಸಮಯದಲ್ಲಿ New Year Gift.apk, Christmas Greeting.apk, Party Pics.apk ಎಂಬ ಹೆಸರಿನ ಫೈಲ್ಗಳನ್ನು ಕಳುಹಿಸುತ್ತಿದ್ದಾರೆ. ಫೈಲ್ ಹೆಸರು ಫೋಟೋ ಅಥವಾ ವೀಡಿಯೊ ಅನ್ನಿಸುವಂತೆ ಇರುತ್ತದೆ, ಆದರೆ ಒಳಗೆ ಇರುವುದು ಅಪಾಯಕಾರಿ ಮಾಲ್ವೇರ್.







