ವಾಟ್ಸಾಪ್ ಪ್ಲಸ್ ಎನ್ನುವುದು ಹೆಚ್ಚುವರಿ ವೈಯಕ್ತಿಕವಾದ ಕೆಲವೊಂದು ವೈಶಿಷ್ಟ್ಯಗಳನ್ನು ಬಯಸುವವರಿಗಾಗಿ ತಂದಿರುವ ಚಂದಾದಾರಿಕೆಯಾಗಿದೆ. ಇದು ಮೂಲ ವಾಟ್ಸಾಪ್ಗೆ ಪರ್ಯಾಯವಲ್ಲ, ಬದಲಾಗಿ ಪ್ರೀಮಿಯಂ ಅನುಭವ ನೀಡುವ ಆಡ್-ಆನ್ ಆಗಿದೆ. ಹೌದು, ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಆವೃತ್ತಿಗಳಲ್ಲಿ ಇದು ಲಭ್ಯವಿದ್ದು ಸೆಟ್ಟಿಂಗ್ಸ್‌ನಲ್ಲಿ ನೇರವಾಗಿ ಆಕ್ಟಿವೇಟ್ ಮಾಡಿಕೊಳ್ಳಬಹುದು.
ಭಾರತದಲ್ಲಿ ವಾಟ್ಸಾಪ್ ಪ್ಲಸ್ ಬೆಲೆಯನ್ನು ತಿಂಗಳಿಗೆ 79 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಮೊದಲ ಬಾರಿ ಚಂದಾದಾರರಾಗುವವರಿಗೆ ಒಂದು ತಿಂಗಳ ಉಚಿತ ಪ್ರಯೋಗ ಸಿಗಲಿದೆ. ಅದರಂತೆ, ಉಚಿತ ಅವಧಿ ಮುಗಿದ ನಂತರ ಬಳಕೆದಾರರು ರದ್ದು ಮಾಡದಿದ್ದರೆ ಪ್ರತಿ ತಿಂಗಳು ಬ್ಯಾಂಕ್ ಖಾತೆ ಅಥವಾ ಯುಪಿಐ ಮೂಲಕ ಸ್ವಯಂಚಾಲಿತವಾಗಿ ಹಣ ಕಡಿತಗೊಳ್ಳುತ್ತದೆ. ಏತನ್ಮಧ್ಯೆ, ಬೇಕಾದಾಗ ಯಾವುದೇ ಸಮಯದಲ್ಲಿಯೂ ಚಂದಾದಾರಿಕೆಯನ್ನು ನಿಲ್ಲಿಸಬಹುದು. ಜೊತೆಗೆ ಬೇಕಿದ್ದರೆ, ಅದನ್ನು ಮತ್ತೆ ರಿಯಾಕ್ಟಿವ್ ಮಾಡಿಕೊಳ್ಳಬಹುದು.
ಪ್ರೀಮಿಯಂ ವೈಶಿಷ್ಟ್ಯ ಏನು?
ವಾಟ್ಸಾಪ್ ಪ್ಲಸ್ ಚಂದಾದಾರರಿಗೆ ಹಲವು ವಿಶೇಷ ಸೌಲಭ್ಯಗಳು ದೊರೆಯಲಿವೆ.
*ಅಪ್ಲಿಕೇಶನ್ ಥೀಮ್ ಬದಲಾಯಿಸುವ ಆಯ್ಕೆ ಸಿಗುತ್ತದೆ. ವಾಟ್ಸಾಪ್ ಐಕಾನ್ ಬಣ್ಣವನ್ನು ಕೂಡ ನಿಮ್ಮ ಇಷ್ಟಕ್ಕೆ ಬದಲಾಯಿಸಬಹುದು.
*ಪ್ರತಿ ಚಾಟ್‌ಗೆ ಪ್ರತ್ಯೇಕ ರಿಂಗ್ಟೋನ್ ಹೊಂದಿಸಲು ಸಾಧ್ಯವಾಗುತ್ತದೆ. ಕುಟುಂಬ, ಸ್ನೇಹಿತರು, ಆಫೀಸ್ ಗ್ರೂಪ್‌ಗೆ ಬೇರೆ ಬೇರೆ ಟೋನ್ ಇಡಬಹುದು.
*ಸಾಮಾನ್ಯವಾಗಿ 3 ಚಾಟ್ ಮಾತ್ರ ಪಿನ್ ಮಾಡಲು ಸಾಧ್ಯವಿದ್ದ ಸ್ಥಳದಲ್ಲಿ ಈಗ 20 ಚಾಟ್‌ಗಳನ್ನು ಪಿನ್ ಮಾಡಬಹುದು.
*AI ರಚಿತ ಎಮೋಜಿಗಳು, ವಿಶೇಷ ಸ್ಟಿಕ್ಕರ್ ಪ್ಯಾಕ್‌ಗಳು ಮತ್ತು ಕಸ್ಟಮ್ ಚಾಟ್ ಪಟ್ಟಿಯ ವಿನ್ಯಾಸ ಲಭ್ಯವಾಗಲಿದೆ. ಇದು ಚಾಟಿಂಗ್ ಅನುಭವವನ್ನು ಹೆಚ್ಚು ವೈಯಕ್ತಿಕಗೊಳಿಸುತ್ತದೆ.







