ಆಸ್ಟ್ರೇಲಿಯಾ ಪ್ರಧಾನಿ ಆಂಟನಿ ಅಲ್ಬನೀಸ್ ಅವರು ಗೂಗಲ್, ಮೆಟಾ, ಟಿಕ್‌ಟಾಕ್ ಸೇರಿದಂತೆ ಇತರ ದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ವಾರ್ನಿಂಗ್ ನೀಡಿದ್ದಾರೆ. ಆಸ್ಟ್ರೇಲಿಯನ್ ಸುದ್ದಿ ಮತ್ತು ಪತ್ರಿಕೋದ್ಯಮದಿಂದ ಈ ಡಿಜಿಟಲ್ ಪ್ಲಾಟ್‌ಫಾರಂಗಳು ಲಾಭ ಪಡೆಯುತ್ತಿದ್ದರೂ, ಅವುಗಳಿಗೆ ನ್ಯಾಯಯುತ ಪಾಲು ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
“ಈಗ ಬಿಗ್ ಟೆಕ್ ಕಂಪನಿಗಳು ಆಸ್ಟ್ರೇಲಿಯನ್ ಪತ್ರಿಕೋದ್ಯಮದಿಂದ ಲಾಭ ಪಡೆಯುತ್ತಿವೆ ಆದರೆ ಅವುಗಳ ನ್ಯಾಯಯುತ ಪಾಲನ್ನು ಕೊಡುತ್ತಿಲ್ಲ. ಆಸ್ಟ್ರೇಲಿಯಾದ ಪತ್ರಕರ್ತರು ಹೇಳುವ ಆಸ್ಟ್ರೇಲಿಯನ್ ಸುದ್ದಿ ಮತ್ತು ಕಥೆಗLiಗೆ ಪರ್ಯಾಯವಿಲ್ಲ. ಆದ್ದರಿಂದ ನಾವು ಮುಂದಿನ ಹಂತಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಪ್ಲಾಟ್‌ಫಾರ್ಮ್‌ಗಳು ಆಸ್ಟ್ರೇಲಿಯನ್ ಸುದ್ದಿಗೆ ಕೊಡುಗೆ ನೀಡುವಂತೆ ಖಚಿತಪಡಿಸುತ್ತೇವೆ” ಎಂದು ಅಲ್ಬನೀಸ್ ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಸರ್ಕಾರವು ನ್ಯೂಸ್ ಬಾರ್ಗೇನಿಂಗ್ ಇನ್‌ಸೆಂಟಿವ್ (NBI) ಯೋಜನೆಯ ಡ್ರಾಫ್ಟ್ ಕಾನೂನನ್ನು ಬಿಡುಗಡೆ ಮಾಡಿದೆ. ಗೂಗಲ್, ಮೆಟಾ (ಫೇಸ್‌ಬುಕ್), ಟಿಕ್‌ಟಾಕ್‌ನಂತಹ ದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಆಸ್ಟ್ರೇಲಿಯನ್ ಮಾಧ್ಯಮ ಸಂಸ್ಥೆಗಳೊಂದಿಗೆ ವಾಣಿಜ್ಯ ಒಪ್ಪಂದ ಮಾಡಿಕೊಂಡರೆ ಅವುಗಳ ಆದಾಯದ ಮೇಲೆ ಕಡಿಮೆ ಲೆವಿ (ಸುಮಾರು 1.5%) ವಿಧಿಸಲಾಗುತ್ತದೆ. ಒಪ್ಪಂದ ಮಾಡಿಕೊಳ್ಳದಿದ್ದರೆ 2.25% ರಷ್ಟು ಹೆಚ್ಚಿನ ಶುಲದ್ಕ ವಿಧಿಸುವ ಯೋಜನೆಯಿದೆ. ಈ ಹಣವನ್ನು ಆಸ್ಟ್ರೇಲಿಯನ್ ಪತ್ರಿಕೋದ್ಯಮವನ್ನು ಬೆಂಬಲಿಸಲು ಬಳಸಲಾಗುತ್ತದೆ.
“ಆಸ್ಟ್ರೇಲಿಯನ್ ಸುದ್ದಿ ಮತ್ತು ಆಸ್ಟ್ರೇಲಿಯಾದ ಪತ್ರಕರ್ತರು ಹೇಳುವ ಕಥೆಗಳಿಗೆ ಪರ್ಯಾಯವಿಲ್ಲ. ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯ” ಎಂದು ಅಲ್ಬನೀಸ್ ಒತ್ತಿ ಹೇಳಿದ್ದಾರೆ.ಈ ನಡೆಯು ಆಸ್ಟ್ರೇಲಿಯನ್ ಪತ್ರಿಕೋದ್ಯಮವನ್ನು ಸುಸ್ಥಿರಗೊಳಿಸುವ ಗುರಿ ಹೊಂದಿದೆ ಎಂದು ಸರ್ಕಾರ ವಿವರಿಸಿದೆ.







