ಇನ್‌ಸ್ಟಾಗ್ರಾಮ್ ತನ್ನ ಬಳಕೆದಾರರಿಗೆ ಹೆಚ್ಚುವರಿ ಸೌಲಭ್ಯಗಳು, ಆಳವಾದ ಮಾಹಿತಿಗಳು ಹಾಗೂ ಹೆಚ್ಚಿನ ವೈಯಕ್ತೀಕರಣ ಆಯ್ಕೆಗಳನ್ನು ಒದಗಿಸುವ ಉದ್ದೇಶದಿಂದ “ಇನ್‌ಸ್ಟಾಗ್ರಾಮ್ ಪ್ಲಸ್” (Instagram Plus) ಎಂಬ ಹೊಸ ಚಂದಾದಾರಿಕೆ (Subscription) ಸೇವೆಯನ್ನು ಪರಿಚಯಿಸಿದೆ.ಕಂಪನಿಯ ಪ್ರಕಾರ, ಸಾಮಾನ್ಯ ಇನ್‌ಸ್ಟಾಗ್ರಾಮ್ ಅನುಭವಕ್ಕಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ಬಯಸುವ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಸೇವೆಯನ್ನು ರೂಪಿಸಲಾಗಿದೆ.
ಇದರ ಮೂಲಕ ಬಳಕೆದಾರರು ತಮ್ಮ ಅಭಿವ್ಯಕ್ತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೋರಿಸಬಹುದು, ಸ್ನೇಹಿತರು ಹಾಗೂ ಸಮುದಾಯಗಳೊಂದಿಗೆ ಹೆಚ್ಚು ನಿಕಟವಾಗಿ ಸಂಪರ್ಕ ಸಾಧಿಸಬಹುದು ಮತ್ತು ವಿಶೇಷ ಪ್ರೀಮಿಯಂ ಉಪಕರಣಗಳನ್ನು ಬಳಸಿಕೊಳ್ಳಬಹುದು.ಇನ್‌ಸ್ಟಾಗ್ರಾಮ್ ಸ್ಪಷ್ಟಪಡಿಸಿರುವಂತೆ, ಪ್ರಸ್ತುತ ಉಚಿತ ಆವೃತ್ತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಹೊಸ ಸೇವೆ ಸಂಪೂರ್ಣವಾಗಿ ಐಚ್ಛಿಕವಾಗಿದ್ದು, ಹೆಚ್ಚುವರಿ ನಿಯಂತ್ರಣಗಳು ಹಾಗೂ ವಿಶೇಷ ಸೌಲಭ್ಯಗಳನ್ನು ಬಯಸುವವರಿಗೆ ಮಾತ್ರ ಇದು ಲಭ್ಯವಾಗಲಿದೆ.
ಭಾರತದಲ್ಲಿ ಇನ್‌ಸ್ಟಾಗ್ರಾಮ್ ಪ್ಲಸ್‌ನ ಮಾಸಿಕ ಚಂದಾ ಶುಲ್ಕ 299 ರೂ ಆಗಿದೆ. ಇನ್ನು ಇನ್‌ಸ್ಟಾಗ್ರಾಮ್ ಪ್ಲಸ್‌ನಲ್ಲಿ ದೊರೆಯುವ ಪ್ರಮುಖ ಸೌಲಭ್ಯಗಳ ಬಗ್ಗೆ ಹೇಳುವುದಾದರೆ ಕಂಪನಿಯ ಪ್ರಕಾರ, ಈ ಚಂದಾದಾರಿಕೆ ಮೂರು ಪ್ರಮುಖ ಅಂಶಗಳ ಮೇಲೆ ಕೇಂದ್ರೀಕೃತವಾಗಿದೆ:
ತಮ್ಮ ಆತ್ಮೀಯರೊಂದಿಗೆ ಇನ್ನಷ್ಟು ನಿಕಟ ಸಂಪರ್ಕ ಸಾಧಿಸಲು ಸಹಾಯ ಮಾಡುವುದು,
ಹೆಚ್ಚುವರಿ ಮಾಹಿತಿ ಹಾಗೂ ಮುನ್ನೋಟಗಳನ್ನು ಒದಗಿಸುವುದು,
ಬಳಕೆದಾರರಿಗೆ ಹೆಚ್ಚಿನ ವೈಯಕ್ತೀಕರಣ (Customization) ಆಯ್ಕೆಗಳನ್ನು ನೀಡುವುದು.
ಮುಖ್ಯ ಪ್ರಯೋಜನಗಳು:
ವಿಶೇಷ ಇನ್‌ಸ್ಟಾಗ್ರಾಮ್ ವೈಶಿಷ್ಟ್ಯಗಳಿಗೆ ಪ್ರವೇಶ
ಸ್ವಯಂ ಅಭಿವ್ಯಕ್ತಿಗಾಗಿ ಹೆಚ್ಚುವರಿ ಉಪಕರಣಗಳು
ಸ್ನೇಹಿತರು ಹಾಗೂ ಸಮುದಾಯಗಳೊಂದಿಗೆ ಸಂಪರ್ಕ ಸಾಧಿಸಲು ಹೊಸ ಮಾರ್ಗಗಳು
ಹೆಚ್ಚುವರಿ ಕಸ್ಟಮೈಸೇಶನ್ ಆಯ್ಕೆಗಳು
ಹೆಚ್ಚು ವೈಯಕ್ತಿಕ ಅನುಭವಕ್ಕಾಗಿ ಪ್ರೀಮಿಯಂ ನಿಯಂತ್ರಣಗಳು
ಆಳವಾದ ವಿಶ್ಲೇಷಣೆಗಳು ಮತ್ತು ಹೆಚ್ಚುವರಿ ಮಾಹಿತಿಗಳಿಗೆ ಪ್ರವೇಶ
ಆಯ್ದ ಹೊಸ ವೈಶಿಷ್ಟ್ಯಗಳನ್ನು ಸಾರ್ವಜನಿಕ ಬಿಡುಗಡೆಗೂ ಮುನ್ನವೇ ಬಳಸುವ ಅವಕಾಶ
ಉಚಿತ ಆವೃತ್ತಿಗೆ ಯಾವುದೇ ತೊಂದರೆಯಾಗದಂತೆ ಪ್ರತ್ಯೇಕ ಚಂದಾದಾರಿಕೆ ಆಧಾರಿತ ಸೌಲಭ್ಯಗಳು
ಇನ್‌ಸ್ಟಾಗ್ರಾಮ್ ಬಳಕೆಯ ಮೇಲೆ ಹೆಚ್ಚು ನಿಯಂತ್ರಣ ಹಾಗೂ ವೈಯಕ್ತಿಕ ಅನುಭವವನ್ನು ಬಯಸುವ ಬಳಕೆದಾರರಿಗಾಗಿ ಈ ಸೇವೆಯನ್ನು ರೂಪಿಸಲಾಗಿದೆ. ಅಂತೆಯೇ ಉಚಿತ ಇನ್‌ಸ್ಟಾಗ್ರಾಮ್ ಸೇವೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇನ್‌ಸ್ಟಾಗ್ರಾಮ್ ತಿಳಿಸಿರುವಂತೆ, ಇನ್‌ಸ್ಟಾಗ್ರಾಮ್ ಪ್ಲಸ್ ಸಂಪೂರ್ಣವಾಗಿ ಐಚ್ಛಿಕ ಸೇವೆಯಾಗಿದೆ.







